ಅಮ್ಮ
ಅಮ್ಮ ಅಮ್ಮ ಅಮ್ಮ
ನಿನ್ನ ಮಡಿಲಸೇರಿ ಪಾವನನಾದೇನಮ್ಮ
ಜನ್ಮ ಜನ್ಮಕೂ ನಿನ್ನ ಮಡಿಲ ಬಯಸುವೇನಮ್ಮ
ದಯಮಾಡಿ ನನ್ನ ನೀ ತೊರೆಯಬೇಡಮ್ಮ.
ನಿನ್ನ ಮಮತೆಯ ಮನೆಯಲ್ಲಿ ಬೆಳೆದೆನಮ್ಮ
ನಿನ್ನಿಂದ ಮನೆಯು ನಂದಗೋಕುಲವಾಗಿತ್ತಮ್ಮ
ನೋವು-ನಲಿವಿನಲ್ಲಿ ಧೈರ್ಯದಿಂದ ನನ್ನ ಸಾಕಿದೆಯಮ್ಮ
ನನ್ನ ಬಿಟ್ಟು ಏಕೆ? ದೂರವಾದೆಯಮ್ಮ.
ನಿನ್ನ ನೆನಪು ನನ್ನನ್ನು ಕಾಡುತಿದೆಯೆಮ್ಮ
ನಿನ್ನನ್ನು ನಾನು ಹೇಗೆ ಮರೆಯಲಮ್ಮ
ಮಕ್ಕಳ ಜೀವನದಲ್ಲಿ ಎಲ್ಲರಿಗಿಂತ ಶ್ರೇಷ್ಠ ನೀನಮ್ಮ
ನೀನಿಲ್ಲದೇ ನನ್ನ ಬದುಕು ಮಿಥ್ಯವಾಗಿದೆಯಮ್ಮ.
1 ಕಾಮೆಂಟ್:
ಹಾಯ್ ಪವನ.
ಲೇಖನ ಓದಿದೆ ತುಂಬಾ ಚನ್ನಾಗಿದೆ,
ಹಿಗೇಯೇ ನಿಮ್ಮಿಂದ ಇಂತಹ ಲೇಖನಗಳು ಹೊಮ್ಮಿ ಬರಲಿ
ಇಂತಿ ನಿಮ್ಮ ಪ್ರೀತಿಯ
ಮಂಜುನಾಥ ತಳ್ಳಿಹಾಳ
ಕಾಮೆಂಟ್ ಪೋಸ್ಟ್ ಮಾಡಿ