ಸೋಮವಾರ, ಜನವರಿ 25, 2010

ಆಹಾ ಪ್ರೇಮ ಎಷ್ಟೋಂದು ಸುಂದರ. ನಲಿಯುತ, ಕುಣಿಯುತ, ಕನಸುಗಳಲ್ಲಿ ಕನವರಿಸುತ ಕಳೆಯುವ ಈ ಯೌವನದ ದಿನಗಳಲ್ಲಿ, ಒಲುಮೆಯ ದೋಣಿಯಲ್ಲಿ ಬಾಳ ಸಂಗಾತಿಯಾಗಿ ಪ್ರೀತಿಸುವ ಜೀವವೊಂದು ಜೊತೆ ಇದ್ದರೆ............................
ಹಾಗೇಯೇ ಪ್ರೀತಿಸುವ ಜೀವಗಳೆರಡು ಅಗಲುವ ಕ್ಷಣಗಳು ಅನಿವಾರ್ಯವಾದಾಗ ಆ ಜೀವಗಳಿಗೆಷ್ಟು ನೋವು , ಹೃದಯಗಳ ಬಡಿತವೇ ನಿಂತತೇ. ಆ ಅಗಲುವಿಕೆಯ ನೋವಿನಲ್ಲೂ ಏನೋ ಒಂದು ಆಸೆ ಮೂಡುತ್ತದೆ. ಆ ಆಸೆಯ ದಡವನ್ನು ಸೇರುವೆನೆ ಎಂಬ ಪ್ರಶ್ನೆಗೆ ಬಹುಶ: ಉತ್ತರ............

ಪ್ರೇಮಿಯ ಆಸೆ

ಬರದಿರಲಿ ಬರದಿರಲಿ
ಸಾವೆನಗೆ ಬರದಿರಲಿ
ಪ್ರೀತಿಯ ಕನಸು ಕರಗದೇ ಇರಲಿ
ಒಲುಮೆಯ ದೋಣಿ ಸಾಗುತಲಿರಲಿ
ಬರದಿರಲಿ.... ಬರದಿರಲಿ...

ನಿನ್ನನು ನಾನು ಅಗಲಿರಲಾರೆ
ನಿನ್ನನು ಮರೆತು ಬದುಕಿರಲಾರೆ
ಹೃದಯದಿ ನಿನ್ನ ಬಚ್ಚಿಟ್ಟಿರುವೆ
ನಿನ್ನನು ನಾ ಹೊರದೂಡಲಾರೆ
ಬರದಿರಲಿ..... ಬರದಿರಲಿ.....

ಬರೆದಿಹ ಬ್ರಹ್ಮ ಹಣೆಬರಹ
ನಡೆದಿದೆ ಬದುಕಲಿ ಸಾವಿನ ಕಲಹ
ಬಯಸುವೆ ಇರಲು ನಿನ್ನ ಸನಿಹ
ಸೇರುವೆನೆ ನಾ ಆಸೆಯ ದಡವ?
ಬರದಿರಲಿ..... ಬರದಿರಲಿ......

2 ಕಾಮೆಂಟ್‌ಗಳು:

tah ಹೇಳಿದರು...

ವಾವ್ಹ್ ಪವನ್,
ಕವನ ಅದ್ಬುತವಾಗಿದೆ, ತುಂಬಾ ಚನ್ನಾಗಿದೆ ಇಂತಹ ಹಲವು ಕವನಗಳು ನಿಮ್ಮಿಂದ ಮೂಡಿ ಬರಲಿ,

Manjunath ಹೇಳಿದರು...

ವಾವ್ಹ್ ಪವನ್,
ಕವನ ಅದ್ಬುತವಾಗಿದೆ, ತುಂಬಾ ಚನ್ನಾಗಿದೆ ಇಂತಹ ಹಲವು ಕವನಗಳು ನಿಮ್ಮಿಂದ ಮೂಡಿ ಬರಲಿ,