ನನ್ನಕ್ಷಿ ಪಟಲದಲ್ಲಿ ಹಿಡಿಯಬೇಕೆಂದಿರುವೆ ನಿನ್ನ ಭಾವಚಿತ್ರ
ಒಂದು ಸಾರಿಯಾದರೂ ಬರಬಾರದೇ ನನ್ನ ಹೃದಯದ ಹತ್ತಿರ.
ಕಲ್ಪನೆಯಲ್ಲಿ ನಿನ್ನನ್ನು ನೆನೆದಾಗ
ನನಗಾವುದು ರೋಮಾಂಚನ
ಇನ್ನು ನೀ ಕಣ್ಮುಂದೆ ಬಂದು ನಿಂತರೆ
ಅಬ್ಬಾ.... ಊಹಿಸಲಾರೆ ನಾ ಆ ಕ್ಷಣ
ಮನದಲ್ಲಿ ಮೂಡಿದಾಗ ನಿನ್ನ ಚಿತ್ರ
ಆಗುವದು ನನಗೇನೋ ವಿಚಿತ್ರ
ಕಣ್ಮುಂದೆ ನೀ ಬಂದು ನಿಂತರೆ
ನಿಂತಲ್ಲೇ ನಾ ಕರಗಿ ಹೋಗುವೆ.
ಹೀಗೆ ಎರಡು ಹೃದಯಗಳ ನಡುವೆ ಪ್ರೀತಿ ಅಂಕುರಿಸಿದಾಗ ಮನಸ್ಸು ಎಷ್ಟು ಸಂತಸ ಪಡುತ್ತದೋ, ಮಾಡದೇ ಇದ್ದರೂ ಅದನ್ನು ಭಾವನೆಗಳಿಂದ ಅನುಭವಿಸಿದಾಗಲೂ ಅಷ್ಟೇ ಮನಸ್ಸು ಸಡಗರ ಪಡುತ್ತದೆ. ಅದಕ್ಕೆ ಪ್ರೀತಿಯನ್ನು ಅನುಭವಿಸಿ ಅನುಸರಿಸಬೇಕಲ್ಲವೇ?
ಹೀಗೇ, ಒಬ್ಬ ಪ್ರೇಮಿಯ ಪ್ರೀತಿ ವಿರಹವಾಗಿ ಬದಲಾದಾಗ, ಪ್ರೇಮಿಯ ಮನಸ್ಸು ಹೇಗೆ ತೊಳಲಾಡುತ್ತದೆ,
ಕುಳಿತಲ್ಲೆ ಕುಳಿತಿದ್ದೆ
ನಾ ಕನಸ ಕಂಡೆ
ಕನಸಲ್ಲಿ ನೀ ಬಂದೆ
ಬಲು ಮೋಹಗೊಂಡೆ
ಆ ಮೋಹ ಅತೀಯಾಗಿ
ನಾ ನಿನ್ನ ಸೆರೆಯಾಗಿ
ನನನ್ನೇ ಮರೆತೆ
ನಾ ನಿನಗೆ ಸೋತೆ.
ವಿರಹಾಗ್ನಿಯಲಿ ನಾನಿರಲು
ನೀ ದೂರವಿರಲು
ಅದರಲ್ಲಿ ನಾ ಬೆಂದು ಹೋದೆ
ನೀ ಬಳಿ ಬರಲಾರದೆ. ಹೀಗೆ ಪ್ರೀತಿಯ ಸುಳಿಯಲ್ಲಿ ಸಿಗದಿದ್ದರೂ, ಅದನ್ನ ಅನುಭವಿಸುವ ಅಗ್ನಿಯಲ್ಲೆ ಬೆಂದು ಹೋಗುತ್ತಾನೆ.
ಈ ಹರೆಯದ ಬಯಕೆಯೇ ಹೀಗೆ, ಏನನ್ನು ನೋಡಿದರೂ, ಕನಸೂ ಕಂಡರೂ, ಒಂದು ಹೆಣ್ಣಿನ/ಗಂಡಿನ ಚಿತ್ರ ನೋಡಿದ ಹಾಗೆ ಭಾಸವಾಗುತ್ತದೆ. ದೇಹ ಆ ಪ್ರಕೃತಿಯು ವರವಾಗಿ ನೀಡಿದ ಅದ್ಭುತ ಸುಖವನ್ನು ಅನುಭವಿಸಲು ಹಾತೊರೆಯುತ್ತದೆ.